📌 ಜುಲೈ 2025: ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮುಖ್ಯವಾದ ಘಟನಾವಳಿಗಳ ಸಂಪೂರ್ಣ ವಿಮರ್ಶೆ
ಜುಲೈ 2025 ಪ್ರಚಲಿತ ಘಟನೆಗಳು—ಭಾರತದಿಂದ ಹಿಡಿದು ಜಗತ್ತಿನವರೆಗೂ, ಒಂದು ತಿಂಗಳಲ್ಲಿ ನಡೆದ ವೈವಿಧ್ಯಮಯ ಘಟನೆಗಳು ಸರ್ಕಾರದ ಮಹತ್ವದ ಘೋಷಣೆಗಳಿಂದ ಆರಂಭಿಸಿ, ಬಾಹ್ಯಾಕಾಶ ಸಾಧನೆ, ಕ್ರೀಡೆ, ಯುದ್ಧನೌಕಾ ಬೆಳವಣಿಗೆ, ಹಾಗೂ ಪರಿಸರ ಪ್ರೇಮದಿಂದ ಕೂಡಿದ ಕಾರ್ಯಕ್ರಮಗಳು ದೇಶದಲ್ಲಿ ನಡೆದಿವೆ. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ, ಇವುಗಳನ್ನು ಓದುವುದು ಪರೀಕ್ಷಾ ಸಿದ್ಧತೆಯ ಪ್ರಮುಖ ಭಾಗ.
ಈ ಲೇಖನವು Month-End Capsule ಶೈಲಿಯಲ್ಲಿ , UPSC, KPSC, SSC, Bank, Teaching ಮುಂತಾದ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನಿರ್ದಿಷ್ಟವಾದ ರೀತಿಯಲ್ಲಿ ಉಪಯುಕ್ತವಾಗಿರುತ್ತದೆ. ನೀವು ಈ ಲೇಖನವನ್ನು ಓದಿದ ಮೇಲೆ, ಜುಲೈ ತಿಂಗಳ ಪ್ರಮುಖ ವಿಷಯಗಳನ್ನು ನೆನಪಿನಲ್ಲಿಡುವುದು ಖಾತರಿ.
ಪ್ರಧಾನಮಂತ್ರಿ ಮೋದಿ ಅವರಿಗೆ ನಮಿಬಿಯಾದ ಉನ್ನತ ನಾಗರಿಕ ಗೌರವ
ನಮಿಬಿಯಾ ರಾಷ್ಟ್ರದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ನಮಿಬಿಯಾದ ಅತ್ಯುನ್ನತ ನಾಗರಿಕ ಗೌರವವಾದ ‘Order of the Most Ancient Welwitschia Mirabilis’ ನೀಡಲಾಗಿದೆ. ಇದರೊಂದಿಗೆ ಪ್ರಧಾನಿ ಮೋದಿ ವಿದೇಶಗಳಿಂದ ಸಂದ ಗೌರವಗಳ ಸಂಖ್ಯೆ 27ಕ್ಕೆ ಏರಿಕೆಯಾಗಿದೆ.
🌐 ಪ್ರಧಾನಮಂತ್ರಿ ಮೋದಿ ಅವರಿಗೆ ವಿದೇಶಗಳಿಂದ ಲಭಿಸಿದ 27 ಗೌರವಗಳು
- ಸೌದಿ ಅರೇಬಿಯಾ – Order of Abdulaziz Al Saud
- ಅಫ್ಘಾನಿಸ್ತಾನ – Amir Amanullah Khan Award
- ಪ್ಯಾಲೆಸ್ಟೈನ್ – Grand Collar of the State of Palestine
- ಮಾಲ್ಡೀವ್ಸ್ – Order of the Distinguished Rule of Nishan Izzuddeen
- ಯುಎಇ (UAE) – Order of Zayed
- ಬಹ್ರೇನ್ – King Hamad Order of the Renaissance
- ಅಮೆರಿಕ – Legion of Merit (Chief Commander Degree)
- ಫಿಜಿ – Companion of the Order of Fiji
- ಪಪುವಾ ನ್ಯೂಗಿನಿಯಾ – Grand Companion of the Order of Logohu
- ಈಜಿಪ್ಟ್ – Order of the Nile
- ಫ್ರಾನ್ಸ್ – Grand Cross of the Legion of Honour
- ಗ್ರೀಸ್ – Grand Cross of the Order of Honour
- ಭೂತಾನ್ – Order of the Druk Gyalpo (First Class)
- ರಷ್ಯಾ – Order of St. Andrew the Apostle
- ನೈಜೀರಿಯಾ – Grand Commander of the Order of the Niger
- ಡೊಮಿನಿಕಾ – Dominica’s Honourary Award
- ಗಯಾನಾ – Order of Excellence
- ಕುವೈತ್ – Order of Mubarak the Great
- ಬಾರ್ಬಡೋಸ್ – Order of Freedom of Barbados
- ಮಾರಿಷಸ್ – Grand Commander of the Order of the Star and Key of the Indian Ocean (GCSK)
- ಶ್ರೀಲಂಕಾ – Sri Lanka Mitra Vibhushana
- ಸೈಪ್ರಸ್ – Grand Cross of the Order of Makarios III
- ಘಾನಾ – Order of the Star of Ghana
- ಟ್ರಿನಿಡಾಡ್ ಮತ್ತು ಟೊಬಾಗೋ – Order of the Republic of Trinidad and Tobago
- ಬ್ರೆಜಿಲ್ – Grand Collar of the Order of the Southern Cross
- ನಮೀಬಿಯಾ – Order of the Most Ancient Welwitschia Mirabilis
- ಇಟಲಿ – ಗೌರವ ಸಾಂದರ್ಭಿಕ ಮಾನ್ಯತೆ
🏛️ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶ ಸುದ್ದಿ
- ಕರ್ನಾಟಕದಲ್ಲಿ ಭಾರತದ ಅತಿ ದೊಡ್ಡ ಎರಡನೇ ಕೇಬಲ್ ಸ್ಟಡ್ ಸೇತುವೆ ಉದ್ಘಾಟನೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಢ್ಕರಿ ಅವರು ಉದ್ಘಾಡಿಸಿದರು ಇದು ಶಿವಮೊಗ್ಗ ಜಿಲ್ಲೆಯ ಸಾಗರ ಮತ್ತು ಮರಕುಟಿಕ ಎಂಬ ಸ್ಥಳಗಳನ್ನ ಸೇರಿಸುತ್ತದೆ. 2.44 ಕಿ.ಮೀ ಉದ್ದ 16 ಮೀ ಅಗಲ ಇದೆ.ಇದು ಭಾರತದಲ್ಲಿನ 2ನೇ ದೀರ್ಘ ಸ್ಟಡ್ ಸೇತುವೆ
- ದೆಹಲಿಯಲ್ಲಿ ಮಹಿಳೆಯರು ಹಾಗೂ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳಿಗೆ ‘ಸಹೆಲಿ ಸ್ಮಾರ್ಟ್ ಕಾರ್ಡ್’ ಮುಖಾಂತರ ಉಚಿತ ಬಸ್ ಸೇವೆ. ಹಿಂದಿನ ಪಿಂಕ್ ಟಿಕೆಟ್ ಸ್ಕೀಮ್‌ನ್ನು ಬದಲಾವಣೆ. ದೆಹಲಿಯ ನಿವಾಸಿ ಮತ್ತು ಆಧಾರ್ ಹೊಂದಿದವರಿಗೆ ಮಾತ್ರ ಲಭ್ಯ.
- ಆಂಧ್ರಪ್ರದೇಶದಲ್ಲಿ ‘ಡಿಜಿ-ಲಕ್ಷ್ಮಿ’ ಯೋಜನೆ—ನಗರ ಬಡ ಮಹಿಳೆಯರ ಸಶಕ್ತಿಕರಣ. ಗುರಿ: 9034 ಸಾಮಾನ್ಯ ಸೇವಾ ಕೇಂದ್ರಗಳು (CSC). ಸೇವೆಗಳು: 250 ಸಾರ್ವಜನಿಕ ಸೇವೆಗಳಿಗೆ ATOM ಕಿಯೋಸ್ಕ್‌ಗಳು.
- ಅಸ್ಸಾಂ ರಾಜ್ಯದಲ್ಲಿ ‘ಗಜ ಮಿತ್ರ’ ಯೋಜನೆ—ಮಾನವ-ಆನೆ ಸಂಘರ್ಷ ತಡೆಗಟ್ಟಲು. 80 ಉನ್ನತ ಅಪಾಯದ ಪ್ರದೇಶಗಳಲ್ಲಿ ಜಾರಿ ಸಮುದಾಯ ಹಸ್ತಕ್ಷೇಪ, ವನ್ಯಜೀವಿ ಸಂರಕ್ಷಣೆ ಉದ್ದೇಶ.
🌐 ಅಂತಾರಾಷ್ಟ್ರೀಯ ಘಟನೆಗಳು
- ಪಾಕಿಸ್ತಾನ 2025 ಜುಲೈ 1 ರಿಂದ ಯುಎನ್ ಸುರಕ್ಷಾ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ವಹಿಸಿದೆ. ಅಧ್ಯಕ್ಷ: ಅಸೀಮ್ ಇಫ್ತಿಖಾರ್ ಅಹ್ಮದ್.
- ರಷ್ಯಾ ತಾಲಿಬಾನ್ ನೇತೃತ್ವದ ಅಫ್ಘಾನಿಸ್ತಾನದ ಸರ್ಕಾರವನ್ನು ಅಧಿಕೃತವಾಗಿ ಗುರುತಿಸಿದ ಮೊದಲ ರಾಷ್ಟ್ರವಾಯಿತು.
- ಕೊಲಂಬಿಯಾ ಮತ್ತು ಉಜ್ಬೆಕಿಸ್ತಾನ್ New Development Bank (NDB)ಗೆ ಸೇರಿದವು. ಸದಸ್ಯ ರಾಷ್ಟ್ರಗಳು ಈಗ 11. ಕೇಂದ್ರ ಕಚೇರಿ: ಶಾಂಘೈ, ಚೀನಾ.
🛰️ ಬಾಹ್ಯಾಕಾಶ ಮತ್ತು ಸೇನೆ
- ಭಾರತೀಯ ವಾಯುಪಡೆಯ ಪೈಲಟ್ ಬಾಹ್ಯಾಕಾಶ ನಿಲ್ದಾಣದಲ್ಲಿ: ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು Axiom Mission 4 (Ax-4) ತಂಡದ ಸದಸ್ಯರಾಗಿದ್ದರು. ಸಂಸ್ಥೆಗಳು: Axiom Space, SpaceX ಮತ್ತು NASA. ಬಾಹ್ಯಾಕಾಶ ನಿಲ್ದಾಣದಲ್ಲಿ ಕಳೆದ ದಿನಗಳು: 18.
- INS ನಿಸ್ತಾರ್: ಭಾರತದಲ್ಲಿ ನಿರ್ಮಿತ ಮೊದಲ ಸ್ವದೇಶಿ ಡೈವಿಂಗ್ ಸಹಾಯ ನೌಕೆ. ನಿರ್ಮಾಣ: ಹಿಂದೂಸ್ತಾನ್ ಶಿಪ್ಯಾರ್ಡ್ ಲಿಮಿಟೆಡ್. ಸಮುದ್ರದಲ್ಲಿ 300 ಮೀ. ಆಳದ ಡೈವಿಂಗ್ ಸಾಮರ್ಥ್ಯ ಹೊಂದಿದೆ.
- INS ಉದಯಗಿರಿ: Project 17A ಅಡಿಯಲ್ಲಿ ಎರಡನೇ ನೌಕೆ. ನಿರ್ಮಾಣ: ಮಜಗಾನ್ ಡಾಕ್ ಶಿಪ್‌ಬಿಲ್ಡರ್ಸ್ ಲಿಮಿಟೆಡ್.
- ಆಸ್ಥಾ ಪೂನಿಯಾ: ಉಪ ಲೆಫ್ಟಿನೆಂಟ್ ಆಸ್ಥಾ ಪೂನಿಯಾ ನೌಕಾಪಡೆಯ ಮೊದಲ ಮಹಿಳಾ ಫೈಟರ್ ಪೈಲೆಟ್.
📌 ಈ ಮಾಹಿತಿಯನ್ನು ಓದಿ:
ಬ್ಯಾಂಕ್ ಆಫ್ ಬರೋಡಾ 330 ಹುದ್ದೆಗಳ ನೇಮಕಾತಿ🏆 ಕ್ರೀಡೆ
- ದಿವ್ಯಾ ದೇಶ್ಮುಖ್: ಭಾರತದ ಮೊದಲ FIDE Women’s World Cup ಚಾಂಪಿಯನ್. ಎದುರಾಳು: ಕೋನೆರು ಹಂಪಿ. ಆತಿಥ್ಯ ರಾಷ್ಟ್ರ: ಜಾರ್ಜಿಯಾ.
- ವಿಂಬಲ್ಡನ್ 2025: ಪುರುಷ ಸಿಂಗಲ್ಸ್ – ಯಾನಿಕ್ ಸಿನ್ನರ್, ಮಹಿಳಾ – ಇಗಾ ಶ್ವಿಯಾಂಟೆಕ್. ಮಿಶ್ರ ಡಬಲ್ಸ್: ಸಾಂಡರ್ ವರ್ಬೀಕ್ / ಕಟೆರಿನಾ ಸಿನಿಯಾಕೋವಾ.
- UEFA ಮಹಿಳಾ ಯುರೋ ಕಪ್ 2025: ವಿಜೇತ – ಇಂಗ್ಲೆಂಡ್; ರನ್ನರ್-ಅಪ್ – ಸ್ಪೇನ್; ಆತಿಥ್ಯ ದೇಶ: ಸ್ವಿಟ್ಜರ್ಲ್ಯಾಂಡ್.
🏅 ಪ್ರಶಸ್ತಿ ಹಾಗೂ ಗೌರವಗಳು
- ವರ್ಷ ದೇಶಪಾಂಡೆ: ಯುಎನ್ ಜನಸಂಖ್ಯಾ ಪ್ರಶಸ್ತಿ 2025. ಸಂಸ್ಥೆ: ದಲಿತ ಮಹಿಳಾ ವಿಕಾಸ್ ಮಂಡಳ.
- ಸುಹಾನಿ ಶಾ: Best Magic Creator 2025 (FISM – ಇಟಲಿ). ಸ್ಥಳ: ಟೊರಿನೋ, ಇಟಲಿ.
📚 ಪುಸ್ತಕಗಳು
- ‘Confessions of a Shakespeare Addict’ – ವಿ.ಎಸ್. ರವಿ.
- ‘2 ದಾಸ್ ಪೈಸೆ ಕಾ ಪೋಸ್ಟ್‌ಕಾರ್ಡ್’ – ಎಸ್.ಎನ್. ಅಹಮದ್.
📝 ಪ್ರಶ್ನೋತ್ತರ ವಿಭಾಗ (MCQs)
- ಪ್ರಧಾನಮಂತ್ರಿ ಮೋದಿ ಅವರಿಗೆ ಜುಲೈ 2025ರಲ್ಲಿ ಯಾವ ರಾಷ್ಟ್ರದ ಗೌರವ ಲಭಿಸಿತು?
ಉತ್ತರ: B. ನಮಿಬಿಯಾ - INS ನಿಸ್ತಾರ್ ಯಾವ ಕ್ಷೇತ್ರಕ್ಕೆ ಸಂಬಂಧಪಟ್ಟಿದೆ?
ಉತ್ತರ: C. ಡೈವಿಂಗ್ ಸಹಾಯ ನೌಕೆ - FIDE Women’s World Cup 2025 ಯಲ್ಲಿ ಜಯಗಳಿಸಿದವರು ಯಾರು?
ಉತ್ತರ: C. ದಿವ್ಯಾ ದೇಶ್ಮುಖ್ - 2026ರ QS Best Student Cities ಪಟ್ಟಿಯಲ್ಲಿ ಟಾಪ್ ನಗರ ಯಾವದು?
ಉತ್ತರ: C. ಸಿಯೋಲ್ - ‘Confessions of a Shakespeare Addict’ ಪುಸ್ತಕದ ಕರ್ತಾರ್ಯಾರು?
ಉತ್ತರ: B. ವಿ.ಎಸ್. ರವಿ