ಇಂಡಿಯನ್‌ ಬ್ಯಾಂಕ್ ನಲ್ಲಿ 1500 ಅಪ್ರೆಂಟಿಸ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ ..!

ಜಯ ತನಯ ( Devaraju S.N )
By -
0

🔔 ಇಂಡಿಯನ್‌ ಬ್ಯಾಂಕ್ ನಲ್ಲಿ 1500 ಅಪ್ರೆಂಟಿಸ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ ..!

🗓️ ಅರ್ಜಿ ಪ್ರಾರಂಭ : 18 ಜುಲೈ 2025

ಕೊನೆ ದಿನಾಂಕ : 07 ಆಗಸ್ಟ್‌ 2025

ಅಪ್ರೆಂಟಿಸ್‌ ಹುದ್ದೆಗಳಿಗೆ ಅರ್ಜಿ ಆಹ್ವಾನಿಸುವ ಮೂಲಕ ಪದವಿದಾರರಿಗೆ ಇಂಡಿಯನ್‌ ಬ್ಯಾಂಕ್‌ ಸುವರ್ಣಾವಕಾಶ ನೀಡಿದೆ. ಬ್ಯಾಂಕಿಗ್‌ ಕ್ಷೇತ್ರದಲ್ಲಿ ಉದ್ಯೋಗ ಬಯಸುವವರಿಗೆ ಇದು ಒಳ್ಳೆಯ ಅವಕಾಶ. ಒಟ್ಟು 1500 ಹುದ್ದೆಗಳಲ್ಲಿ ಕರ್ನಾಟಕ ರಾಜ್ಯಕ್ಕೆ 42 ಹುದ್ದೆಗಳ ಮೀಸಲಿರಿಸಲಾಗಿದೆ. ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ತರಬೇತಿ ಪಡೆದು ಒಳ್ಳೆಯ ವೃತ್ತಿ ಜೀವನ ಆರಂಭಿಸಲು ಇದೊಂದು ಸುವರ್ಣ ಅವಕಾಶ. ಹೆಚ್ಚಿನ ವಿವರಗಳನ್ನು ಕೆಳಗೆ ನೀಡಲಾಗಿದೆ.


" this image contain Indian bank  1500 apprentice job  information 2025"


📌 ಹುದ್ದೆಗಳ ಮಾಹಿತಿ:

  • ಹುದ್ದೆಯ ಹೆಸರು : ಅಪ್ರೆಂಟಿಸ್‌ ( Apprentice)
  • ವಿಭಾಗ/ಸಂಸ್ಥೆ: ಇಂಡಿಯನ್‌ ಬ್ಯಾಂಕ್
  • ಖಾಲಿ ಹುದ್ದೆಗಳ ಸಂಖ್ಯೆ: 1500
  • ಕರ್ನಾಟಕದಲ್ಲಿ ಹುದ್ದೆಗಳ ಸಂಖ್ಯೆ: 42
  • ಅರ್ಹತೆ:  ಯಾವುದೇ ಪದವಿ
  • ವಯೋಮಿತಿ: 20 ರಿಂದ 28 ವರ್ಷಗಳು (ಮೀಸಲಾತಿ ಇದ್ದರೆ ವಯೋಮಿತಿ ಸಡಿಲಿಕೆ ಇದೆ )
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 07 ಆಗಸ್ಟ್‌ 2025


ಅರ್ಜಿ ಶುಲ್ಕ: 

  1. ಸಾಮಾನ್ಯ,OBC,EWS ಅಭ್ಯರ್ಥಿಗಳಿಗೆ- 800 ರೂ. 
  2. SC/ST,PWD ಅಭ್ಯರ್ಥಿಗಳಿಗೆ- 175  ರೂ


ಆಯ್ಕೆ ಪ್ರಕ್ರಿಯೆ

ಆಯ್ಕೆ ಪ್ರಕ್ರಿಯೆಯು ಒಟ್ಟು 2 ಹಂತದಲ್ಲಿ ಇರುತ್ತದೆ

1ನೇ ಹಂತ -100 ಅಂಕಗಳಿಗೆ online ಲಿಖಿತ ಪರೀಕ್ಷೆ.
 ಇದು english ಭಾಷೆಯಲ್ಲಿದ್ದು ಇದು ಬ್ಯಾಂಕಿಂಗ್‌ ಸಾಮಾನ್ಯ ಜ್ಞಾನ, ಸಂಖ್ಯಾಶಾಸ್ತೃ,ತಾರ್ಕಿಕ ಸಾಮರ್ಥ್ಯ ಮತ್ತು ಇಂಗ್ಲಿಷ್‌ ಭಾಷೆಯ ಪರೀಕ್ಷೆ ನಡೆಯುತ್ತದೆ.

2ನೇ ಹಂತ - ಭಾಷಾ ಪರೀಕ್ಷೆ : ಸ್ಥಳೀಯ ರಾಜ್ಯದ ಭಾಷಾ ಪರೀಕ್ಷೆಯಾಗಿರುತ್ತದೆ.

ಈ ಹುದ್ದೆಯ ಸಂಬಳ

  • ತಿಂಗಳಿಗೆ 15000/ರೂ - ನಗರ ಮತ್ತು ಮಹಾನಗರ ಶಾಖೆಗಳಲ್ಲಿ.
  • ತಿಂಗಳಿಗೆ 12000/ರೂ - ಗ್ರಾಮೀಣ ಮತ್ತು ಅರೆ ನಗರ ಶಾಖೆಗಲ್ಲಿ


ಪ್ರಮುಖ ದಿನಾಂಕಗಳು

ಅರ್ಜಿ ಪ್ರಾರಂಭ : 18 ಜುಲೈ 2೦25

       ಕೊನೆ ದಿನಾಂಕ : 07 ಆಗಸ್ಟ್‌ 2025


📥 ಅರ್ಜಿ ಸಲ್ಲಿಸುವ ವಿಧಾನ:

ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅಥವಾ ನೇರ ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿಗೆ ಅಗತ್ಯವಿರುವ ದಾಖಲೆಗಳನ್ನು ಸಿದ್ಧವಾಗಿ ಇಟ್ಟುಕೊಂಡು ಸೂಕ್ತ ಸಮಯದಲ್ಲಿ ಅರ್ಜಿ ಸಲ್ಲಿಸುವುದು ಉತ್ತಮ. ಅರ್ಜಿ ಸಲ್ಲಿಸುವ ಸಮಯದಲ್ಲಿ ಯಾವುದೇ ಸಮಸ್ಯೆಗಳು ಬಾರದಂತೆ ಎಚ್ಚರಿಕೆ ವಹಿಸಿ ಮುಂಚಿತವಾಗಿ ಅರ್ಜಿ ಸಲ್ಲಿಸಿ.

ಈ ಅವಕಾಶವು ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ತರಬೇತಿಯ ಜೊತೆಗೆ ಅನುಭವ ಪಡೆದು ಸ್ಥಿರವಾದ ಭವಿಷ್ಯ ಕಟ್ಟಿಕೊಳ್ಳಲು ಅನುವು ಮಾಡಿಕೊಡುತ್ತದೆ


⚠️ ಮುಖ್ಯ ಸೂಚನೆಗಳು:

  • ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿದ ನಂತರ ಮಾತ್ರ ಅರ್ಜಿ ಸಲ್ಲಿಸಿ.
  • ಅರ್ಜಿ ಸಲ್ಲಿಸಲು ಅರ್ಹತಾ ಮಾನದಂಡಗಳನ್ನು ಪೂರೈಸಬೇಕು.
  • ಆನ್‌ಲೈನ್ ಅರ್ಜಿ ಸಲ್ಲಿಸಲು ಸಮಯದಲ್ಲಿ ಜಾಗರೂಕರಾಗಿ ಇರಬೇಕು.
  • ಹೆಚ್ಚಿನ ಮಾಹಿತಿಗಾಗಿ ಇಂಡಿಯನ್ ಬ್ಯಾಂಕ್ ( Indian bank) ಅಧಿಕೃತ website ನೋಡಿ notification ಓದಿ.

ಮಾಹಿತಿಯ ಮೂಲ: ಸರ್ಕಾರಿ ಅಧಿಸೂಚನೆ/ಅಧಿಕೃತ ವೆಬ್‌ಸೈಟ್

ನಮ್ಮ SUTRA ಕರುನಾಡು ವೆಬ್‌ ಸೈಟ್ನಲ್ಲಿ ಯಾವುದೇ ಸುಳ್ಳು ಮಾಹಿತಿ ಹಂಚಿಕೊಳ್ಳುವುದಿಲ್ಲ  ಮತ್ತು ಪ್ರತಿ ಮಾಹಿತಿಯು ನಿಖರವಾಗಿರುತ್ತವೆ ವಿವಿಧ ಅಧಿಕೃತ ಮೂಲಗಳಿಂದ ಸಂಪಾದಿಸಲಾಗಿರುತ್ತದೆ.


ಈ ಮಾಹಿತಿಯನ್ನು ಎಲ್ಲರಿಗೂ ಶೇರ್‌ ಮಾಡಿ — ಶೇರ್‌ ಮಾಡಲು ಕೆಳಗಿರುವ ಶೇರ್‌ ಬಟನ್‌ಗಳನ್ನು ಕ್ಲಿಕ್‌ ಮಾಡಿ.


Post a Comment

0 Comments

Post a Comment (0)
3/related/default

#buttons=(Ok, Go it!) #days=(20)

Our website uses cookies to enhance your experience. Check Out
Ok, Go it!
Telegram Join WhatsApp Join