(SWR) ನೈರುತ್ಯ ರೈ ಲ್ವೆ ನೇಮಕಾತಿ 2025 (SSLC/ ITI) - 904 ಹುದ್ದೆಗಳು

ಜಯ ತನಯ ( Devaraju S.N )
0

ನೈರುತ್ಯ ರೈಲ್ವೆ (SWR) – ಹುಬ್ಬಳ್ಳಿ ಅಪ್ರೆಂಟಿಸ್ ನೇಮಕಾತಿ 2025: ಸಂಪೂರ್ಣ ಮಾಹಿತಿ, ಅರ್ಜಿ ವಿಧಾನ, ಆಯ್ಕೆ ಪ್ರಕ್ರಿಯೆ ಮತ್ತು ಎಲ್ಲಾ ಮುಖ್ಯ ವಿವರಗಳು

ವಿವರಣೆ:

ಭಾರತೀಯ ರೈಲ್ವೆ ಇಲಾಖೆ ತನ್ನ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸುತ್ತಿರುತ್ತದೆ. ಈ ಭಾರಿಯೂ ಸಹ ಯುವ ಜನಸಂಖ್ಯೆಗೆ ಉದ್ಯೋಗ ನೀಡುಲು  ಹೆಚ್ಚಿನ ಹುದ್ದೆಗಳಿಗೆ ಪ್ರಕಟಣೆ ನೀಡಿ ಮಹತ್ವದ ಕೆಲಸ ಮಾಡಿದೆ  ನೈರುತ್ಯ ವಲಯ ರೈಲ್ವೆ, ಹುಬ್ಬಳ್ಳಿ ವಿಭಾಗ, 2025ನೇ ಸಾಲಿನ ಅಪ್ರೆಂಟಿಸ್ ನೇಮಕಾತಿ ಪ್ರಕಟಣೆಯಲ್ಲಿ 904 ಖಾಲಿ ಸ್ಥಾನಗಳೊಂದಿಗೆ ಬಿಡುಗಡೆ ಮಾಡಿದೆ. ಉದ್ಯೋಗ ಹುಡುಕುತ್ತಿರುವ ಯುವಜನತೆಗೆ ಇದೊಂದು ಒಳ್ಳೆಯ ಅವಕಾಶ, ಭಾರತೀಯ ರೈಲ್ವೆ ಕ್ಷೇತ್ರದಲ್ಲಿ ವೃತ್ತಿ ಪ್ರಾರಂಭಿಸಿ ದೇಶದ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಲು ಇದೊಂದು ವಿಶೇಷ ಅವಕಾಶ.

ಈ ಲೇಖನದಲ್ಲಿ, ನೀವು ಅರ್ಜಿ ಸಲ್ಲಿಸುವ ವಿಧಾನ ಹೇಗೆ ? ಅರ್ಹತೆಗಳು ಏನೇನು?, ಆಯ್ಕೆ ಪ್ರಕ್ರಿಯೆ ಹೇಗೆ?, ಬೇಕಾಗುವಂತ ಅಗತ್ಯ ದಾಖಲೆಗಳು ಮತ್ತು ಹೆಚ್ಚಿನ ಮಾಹಿತಿಯನ್ನು  ವಿವರವಾಗಿ ನೀಡಲಾಗಿದೆ

         
ಈ ಪೋಸ್ಟ್‌‌ ೨೦೨೫ ರ  ನೈರುತ್ಯ ವಲಯ ರೈಲೈಯ ೯೦೪ ಅಪ್ರೆಂಟಿಸ್  ಹುದ್ದೆಗಳ ನೇಮಕಾಕಾತಿಗೆ ಸಂಬಂಧಿಸಿದೆ

1. ನೇಮಕಾತಿಯ ಬಗ್ಗೆ ಮಾಹಿತಿ

(SWR) ನೈರುತ್ಯ ರೈಲ್ವೆ  ವಲಯವು ( ಹುಬ್ಬಳ್ಳಿ, ಬೆಂಗಳೂರು,ಮೈಸೂರು ವಿಭಾಗಗಳು) ತನ್ನ ಕಾರ್ಯಕ್ಷೇತ್ರದ ವಿವಿಧ ವರ್ಕ್‌ಶಾಪ್ ಹಾಗೂ ವಿಭಾಗಗಳಲ್ಲಿ 904 ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದೆ.

  ಅರ್ಜಿ ಸಲ್ಲಿಕೆಗೆ  2025 ಜುಲೈ 14 ರಿಂದ ಆಗಸ್ಟ್ 13ರವರೆಗೆ ಕಾಲಾವಕಾಶ ಇದೆ.


2. ಹುದ್ದೆಗಳ ವಿಭಾಗ ಮತ್ತು ಹುದ್ಧೆಗಳ ಸಂಖ್ಯೆಯ ವಿವರ

ವಿಭಾಗ / ವರ್ಕ್‌ಶಾಪ್ ಹುದ್ದೆಗಳ ಸಂಖ್ಯೆ
ಹುಬ್ಬಳ್ಳಿ ವಿಭಾಗ 237
ಕೇರೇಜ್ ರಿಪೇರ್ ವರ್ಕ್‌ಶಾಪ್, ಹುಬ್ಬಳ್ಳಿ 217
ಬೆಂಗಳೂರು ವಿಭಾಗ 230
ಮೈಸೂರು ವಿಭಾಗ 177
ಸೆಂಟ್ರಲ್ ವರ್ಕ್‌ಶಾಪ್, ಮೈಸೂರು 43
ಒಟ್ಟು ಹುದ್ದೆಗಳು 904


3. ಅರ್ಹತಾ ಮಾನದಂಡ

ವಯೋಮಿತಿ

  • ಕನಿಷ್ಠ: 15 ವರ್ಷ
  • ಗರಿಷ್ಠ: 24 ವರ್ಷ (ಅಗಸ್ಟ್ 13, 2025 ರಂತೆ )
  • ವಯೋಮಿತಿ ರಿಯಾಯಿತಿ:
    • SC/ST: 5 ವರ್ಷಗಳು
    • OBC: 3 ವರ್ಷಗಳು
    • PwD: 10 ವರ್ಷಗಳು


ಶೈಕ್ಷಣಿಕ ಅರ್ಹತೆ

  • 10ನೇ ತರಗತಿ SSLC ನಲ್ಲಿ ಕನಿಷ್ಠ 50% ಅಂಕ ಮತ್ತು ITI (NCVT/SCVT) ಸರ್ಟಿಫಿಕೆಟ್ ಹೊಂದಿರಬೇಕು.


4. ಹುದ್ದೆಗಳ ವಿವರ

  • ಫಿಟ್ಟರ್ (Fitter)
  • ಎಲೆಕ್ಟ್ರೀಷಿಯನ್ (Electrician)
  • ವೆಲ್ಡರ್ (Welder)
  • ಮಷೀನಿಸ್ಟ್ (Machinist)
  • ಟರ್ನರ್ (Turner)
  • ಕಾರ್ಪೆಂಟರ್ (Carpenter)
  • ಪೇಂಟರ್ (Painter)

ಹೆಚ್ಚಿನ ಹುದ್ದೆಗಳ ಮಾಹಿತಿಗೆ ಅಧಿಕೃತ ಅಧಿಸೂಚನೆ ಪರೀಕ್ಷಿಸಿ.


5. ಅರ್ಜಿ ಸಲ್ಲಿಸುವ ವಿಧಾನ

  1. www.rrchubli.in ಗೆ ಭೇಟಿ ನೀಡಿ.
  2. “Online Application” ಕ್ಲಿಕ್ ಮಾಡಿ.
  3. ನೋಂದಣಿ ಮಾಡಿ, ಅಗತ್ಯ ಮಾಹಿತಿಯನ್ನು ಪೂರೈಸಿ.
  4. ಪಾಸ್‌ಪೋರ್ಟ್ ಸೈಜ್ ಫೋಟೋ, ITI ಪ್ರಮಾಣಪತ್ರ ಅಪ್ಲೋಡ್ ಮಾಡಿ.
  5. ಅರ್ಜಿಸುಲ್ಕ ₹100 ಪಾವತಿಸಿ (SC/ST/ಮಹಿಳೆಯರಿಗೆ ಶುಲ್ಕವಿಲ್ಲ).
  6. ಅರ್ಜಿಯನ್ನು ಪರಿಶೀಲಿಸಿ ಸಲ್ಲಿಸಿ.
  7. ಅರ್ಜಿಯ ರಶೀದಿ ಡೌನ್‌ಲೋಡ್ ಮಾಡಿ ಇಟ್ಟುಕೊಳ್ಳಿ.


6. ಆಯ್ಕೆ ಪ್ರಕ್ರಿಯೆ

  • ಯಾವುದೇ ಲಿಖಿತ ಪರೀಕ್ಷೆ ಇಲ್ಲ.
  • 10ನೇ ಮತ್ತು ITI ಅಂಕಗಳ ಆಧಾರದಲ್ಲಿ ಮೆರಿಟ್ ಪಟ್ಟಿಯಲ್ಲಿ ಅರ್ಹರ ಆಯ್ಕೆ ನಡೆಯುತ್ತದೆ.
  • ದಾಖಲೆ ಪರಿಶೀಲನೆ ಹಾಗೂ ವೈದ್ಯಕೀಯ ಪರೀಕ್ಷೆ ನಡೆಯುತ್ತದೆ.


7. ಮುಖ್ಯ ದಿನಾಂಕಗಳು

ವಿಷಯ ದಿನಾಂಕ
ಅರ್ಜಿಗಳ ಪ್ರಾರಂಭ
ದಿನಾಂಕ
14 ಜುಲೈ 2025
ಅರ್ಜಿಗಳ ಕೊನೆ ದಿನಾಂಕ 13 ಆಗಸ್ಟ್ 2025 (ರಾತ್ರಿ 11:59)



8. ಅರ್ಜಿ ಸಲ್ಲಿಕೆಯ ಸಮಯದಲ್ಲಿನ ಸೂಕ್ತ ಸಲಹೆಗಳು

  • ಒಬ್ಬ ಅಭ್ಯರ್ಥಿ ಒಂದು ಅರ್ಜಿಯನ್ನು ಮಾತ್ರ ಸಲ್ಲಿಸಬೇಕು.
  • ಎಲ್ಲಾ ದಾಖಲೆಗಳು ಸಿದ್ಧವಾಗಿ ಇಟ್ಟುಕೊಂಡು ಅರ್ಜಿ ಹಾಕಿ.
  • ಅರ್ಜಿಯ ನಂತರ ದೋಷ ತಿದ್ದುಪಡಿ ಸಾಧ್ಯವಿಲ್ಲ ಹಾಗಾಗಿ ಎಚ್ಚರಿಕೆಯಿಂದ ಅರ್ಜಿ ಹಾಕಿ.
  • ಕೇವಲ ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಿ.


9. ಗಮನದಲ್ಲಿಟ್ಟುಕೊಳ್ಳಬೇಕಾದ ವಿಷಯಗಳು (FAQs)

  • ಅರ್ಜಿಯ ಕೊನೆಯ ದಿನ ಯಾವುದು?13 ಆಗಸ್ಟ್ 2025
  • ಅರ್ಜಿಯನ್ನು ಎಲ್ಲಿಗೆ ಸಲ್ಲಿಸಬಹುದು?www.rrchubli.in
  • ಆಯ್ಕೆ ಪ್ರಕ್ರಿಯೆ ಯಾವುದು? 10ನೇ ತರಗತಿ ಮತ್ತು ITI ಅಂಕಗಳ ಆಧಾರದ ಮೇಲೆ ನಡೆಯುವುದು.
  • ಯಾರಿಗೆ ಅವಕಾಶ?15-24 ವರ್ಷ ವಯಸ್ಸಿನವರೆಗಿನ, SSLC ಪಾಸಾಗಿರುವ, ಸಂಬಂಧಿತ ITI ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಮಾತ್ರ ಅವಕಾಶ ಪಡೆಯಬಹುದು.
  • ಅರ್ಜಿಸ ಶುಲ್ಕ ಎಷ್ಟು? ₹100 (Gen/OBC); SC/ST/ಮಹಿಳೆಯರಿಗೆ ವಿನಾಯಿತಿ ಇದೆ.


10. ಪ್ರಮುಖ ಸಲಹೆಗಳು

  • ಅರ್ಜಿಗಿಂತ ಮೊದಲು ಎಲ್ಲಾ ದಾಖಲೆಗಳನ್ನು  ಪರಿಶೀಲಿಸಿ ಇಟ್ಟುಕೊಳ್ಳಿ.
  • ITI ಶಿಕ್ಷಣದ ಮಾಹಿತಿ ಅಥವಾ ಅಂಕಗಳ ಮಾಹಿತಿ ಸರಿಯಾಗಿ ತುಂಬಿರಿ .
  • ಅರ್ಜಿಯ ಪ್ರತಿಯನ್ನೂ ಡೌನ್‌ಲೋಡ್ ಮಾಡಿ ಸುರಕ್ಷಿತವಾಗಿ ಇಡಿ.
  • ರೈಲ್ವೆ ಉದ್ಯೋಗಕ್ಕಾಗಿ ನಿರಂತರ ಅಭ್ಯಾಸ ಮಾಡಿ ಮುಂಬರುವ ಪರೀಕ್ಷೆಗಳಲ್ಲಿ ಮುಂದುವರಿಯಿರಿ ಯಶಸ್ವಿಯಾಗುತ್ತೀರಿ.


11. ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಬಯಸುವವರಿಗೆ

ಕರ್ನಾಟಕದ ರೈಲ್ವೆ ನೈರುತ್ಯ ವಲಯದಲ್ಲಿ ಉತ್ತಮ ವೃತ್ತಿ ರೂಪಿಸಿಕೊಳ್ಳಲು ಇದು ದೊಡ್ಡ ಅವಕಾಶ. ವಿವಿಧ ವಿಭಾಗ ಹಾಗೂ ಕಾರ್ಮಿಕ ವರ್ಕ್‌ಶಾಪ್‌ಗಳಿಗೆ ನೇಮಕಾತಿಯಲ್ಲಿ ನೀವು ಭಾಗವಹಿಸಬಹುದು. ನಿಮ್ಮ ಕನಸಿನ ಉದ್ಯೋಗ ಪಡೆಯಲು ಇದು ಸುವರ್ಣ ಅವಕಾಶ. 

ಅಧಿಕೃತ ವೆಬ್ಸೈಟ್: www.rrchubli.in

ಸಹಾಯವಾಣಿ ಸಂಖ್ಯೆಗೆ: ಅಧಿಕೃತ ವೆಬ್‌ಸೈಟ್ ನೋಡಿ

ನಿಮ್ಮ ಯಶಸ್ಸಿಗೆ ಶುಭಾಶಯಗಳು!

 

 ಇನ್ನೂ ಹೆಚ್ಚಿನ  ಉದ್ಯೋಗ ಮಾಹಿತಿಗಳಿಗೆ  ನಿಮ್ಮ SUTRA ಕರುನಾಡು ವೆಬ್ಸೈಟ್ಗೆ ಭೇಟಿ ನೀಡುತ್ತಿರಿ.


-ಈ ಮಾಹಿತಿಯನ್ನು ಎಲ್ಲರಿಗೂ ಶೇರ್‌ ಮಾಡಿ ಕೆಳಗಿರುವ ಶೇರ್‌ ಬಟನ್‌  ಕ್ಲಿಕ್‌ ಮಾಡಿ.


Post a Comment

0 Comments

Post a Comment (0)
3/related/default